Saturday 17 March 2012

ಯಾವುದು ಸುಖ...??

ಚ೦ದಮಾಮ ಬಾಲಮಿತ್ರದ ಕಥೆಗಳಲ್ಲಿ
ಹಲವು ಬಾರಿ ಓದಿದ್ದಿದೆ ,
ಕೊನೆಗೆಲ್ಲರೂ ಸುಖವಾಗಿದ್ದರೆ೦ದು....
ಹಿರಿಯರಿ೦ದ ಆಶೀರ್ವಾದ ಪಡೆದಿದ್ದೆ
ನೂರ್ಕಾಲ ಸುಖವಾಗಿ ಬಾಳೆ೦ದು...
ಅರಿತದ್ದೂ ಇದೆ,
ಎಲ್ಲರ ಬಾಳಿನ ಮೂಲ ಬಯಕೆ
ಈ ಸುಖವೇ ಎ೦ದು....
ಹೀಗಿದ್ದರೆ, ಈ ಸುಖ ಎ೦ದರೆ ಯಾವುದು...?
 
ಬಾಲ್ಯದಲ್ಲಿ ಅಪ್ಪ ಆಟಿಕೆಗಳ ಕೊಡಿಸಿದಾಗ
ಹಿರಿಹಿರಿ ಹಿಗ್ಗಿದ್ದಿದೆ...
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಆಟಿಕೆ ಮುರಿದಾಗ, ಹೊಸ ಆಟಿಕೆ ಸಿಗದಾದಾಗ,
ಮುನಿಸಿಕೊ೦ಡಿದ್ದಿದೆ, ಅತ್ತದ್ದಿದೆ...
ಹಾಗಿದ್ದರೆ, ಈ ಹಿಗ್ಗು ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಓದುವಾಗ, ನಾನಿಷ್ಟಪಟ್ಟ ಪದವಿಯಲ್ಲಿ
ಮೊದಲ ಸ್ಥಾನ ಗಳಿಸಿದ್ದಿದೆ...
ಕುಣಿದು ಕುಪ್ಪಳಿಸಿದ್ದಿದೆ....
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಸೂಕ್ತ ಕೆಲಸ ಸಿಗದಿದ್ದಾಗ, ಮನ್ನಣೆ ದೊರೆಯದಿದ್ದಾಗ,
ನಿರಾಶೆಗೊ೦ಡಿದ್ದಿದೆ, ಹತಾಶೆಯಾದದ್ದಿದೆ...
ಹಾಗಿದ್ದರೆ, ಈ ಕುಣಿತ ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಅವಳ ಮೊದಲ ನೋಟಕ್ಕೆ ಕರಗಿ,
ಅವಳೇ ಬಾಳಸ೦ಗಾತಿಯಾದರೇ...? ಅ೦ತ ಬಯಸಿದ್ದಿದೆ.....
ಅವಳು ನನ್ನ ವರಿಸಿ, ಬಳ್ಳಿಯಾಗಿ ನನ್ನನಪ್ಪಿ,
ಅವಳೇ ನಾನಾದಾಗ, ಮೈಮರೆತಿದ್ದಿದೆ....
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಆದರೆ ವಯಸ್ಸಾದಾಗ, ಹಾಸಿಗೆ ಬಿಡದ೦ತಾದಾಗ,
ಆ ಸುಖ ಭ್ರಮೆಯೆನಿಸಿದ್ದಿದೆ...
ಹಾಗಿದ್ದರೆ, ಈ ಮೈಮರೆವು ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಕಾಣುತ್ತೇನೆ,
ಈ ಕ್ಷಣಿಕ ಸುಖಗಳ ದಾಸರಾಗಿ,
ಅದರ ಹಿ೦ದೆ ಓಡುವವರನ್ನು....
ಶಾಶ್ವತವಾಗಿ ಗಳಿಸಿಕೊಳ್ಳಬಹುದಾದೊ೦ದು
ಸುಖವನ್ನು ಮರೆತು ಬಿಟ್ಟಿದ್ದಾರವರು...
ನಾನದನ್ನು ಕ೦ಡುಕೊ೦ಡಿದ್ದೇನೀಗ...!!
 
ಆಶ್ಚರ್ಯವೇ...?
ಎಲ್ಲ ವಯೋಸಹಜ ತಾತ್ಕಾಲಿಕ ಸುಖಗಳನ್ನನುಭವಿಸಲು
ಈ ಮೂಲ ಸುಖವೊ೦ದಿರಲೇಬೇಕು...
ಆರೋಗ್ಯ...!! ಹೌದು ಅದುವೇ ಆರೋಗ್ಯ..!!
ಇದೊ೦ದಿದ್ದರೆ ಮಿಕ್ಕೆಲ್ಲ ಸುಖಕ್ಕೆ ಅರ್ಥ...
ಇರದಿದ್ದರೆ ಎಲ್ಲ ವ್ಯರ್ಥ....
ಅದಕ್ಕಾಗಿಯೇ ಅಲ್ಲವೇ ಅನ್ನುವುದು -
"ಆರೋಗ್ಯವೇ ಭಾಗ್ಯ"....!!

2 comments:

  1. ಜೀವನದ ಎಲ್ಲ ಹ೦ತಗಳಲ್ಲೂ ವಿಭಿನ್ನವಾದ ಶಾರೀರಿಕ, ಮಾನಸಿಕ ಸುಖಗಳಿವೆ ಎನ್ನುವುದನ್ನು ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಬನ್ನಿ.

    ReplyDelete
  2. ಸ್ಪ೦ದನೆಗೆ ಧನ್ಯವಾದಗಳು.. ಮತ್ತೆ ಮತ್ತೆ ಬರುತ್ತಿರಿ..
    ನಿಮ್ಮ ಬ್ಲಾಗನ್ನು ವಿಹರಿಸಿದ್ದೇನೆ.. ಚೆನ್ನಾಗಿದೆ...

    ReplyDelete