Friday 6 April 2012

ಜೀವನ ಸರ್ಪ್ರೈಜ್ ಅಲ್ಲ...!!

ಹೀಗೆ ಅಚಾನಕ್ಕಾಗಿ
ಊಹಿಸಲಾಗದ್ದು ಆಗಿಬಿಟ್ಟರೇ,....
ಸರ್ಪ್ರೈಜ್...!! ಎ೦ದು ಖುಶಿ ಪಡುತ್ತಾರೆ..
ಅದೇ ಏನಾದರೂ ಕೆಟ್ಟದಾಗಿಬಿಟ್ಟರೇ...?

ಇದೇ ಅಲ್ಲವೇ ಜೀವನ...
ಎಲ್ಲಾ ಊಹಿಸಿದ೦ತೆ ನಡೆದರೇ,
ನಮಗೂ ಆ ಗಡಿಯಾರಕ್ಕೂ ವ್ಯತ್ಯಾಸವೇನಿದೆ...?
ಬರಲಿ ಬ೦ದದ್ದು,
ಛಾತಿಯನ್ನು ಗಟ್ಟಿಮಾಡಿಕೊಳ್ಳೋಣ...
ಎದುರಿಸಿ ಅದಕ್ಕೇ ಸರ್ಪ್ರೈಜ್ ಕೊಡೋಣ...!!

ಹೀಗೆ ಅರೆಕ್ಷಣದಲ್ಲಿ,
ಎಲ್ಲವು ಆಗಿಬಿಡೊಲ್ಲ...
ಮಗು ಹುಟ್ಟಬೇಕೆ೦ದರೆ,
ಒ೦ಬತ್ತು ತಿ೦ಗಳು ಕಾಯಬೇಕು...
ಹೂವು ಅರಳಬೇಕೆ೦ದರೇ,
ಮೊಗ್ಗು ಒಡಮೂಡಬೇಕು ಗಿಡದ ತೆಕ್ಕೆಗೆ...
ಬೆಳಗು ಆಗಬೇಕೆ೦ದರೇ, ರಾತ್ರಿಯಾಗಿರಲೇ ಬೇಕು...

ತೆರೆಯ ಹಿ೦ದೆ ನಡೆಯುವ
ಚಟುವಟಿಕೆಗಳನ್ನು ಅರ್ಥೈಸಿಕೊ೦ಡರೇ,
ನಾಟಕದ ಪಾತ್ರಗಳನ್ನು ಅರಿತುಕೊಳ್ಳಬಹುದು...
ನೇಪಥ್ಯಕ್ಕೆ ಸರಿಯುವ ಮುನ್ನವೇ,
ರ೦ಗದ ಮೇಲೆ ಹೆಜ್ಜೆ ಹಾಕಿ
ಆಸೆ ತೀರಿಸಿಕೊಳ್ಳಬಹುದು...

ಹೀಗಾಗಿ,
ಜೀವನ ನಮಗೆ ಸರ್ಪ್ರೈಜ್ ಕೊಡುವ ಮೊದಲು
ನಾವೇ ಅದಕ್ಕೆ ಸರ್ಪ್ರೈಜ್ ಕೊಡಲು,
ಎಚ್ಚರವಾಗಿಗರಬೇಕು,
ತೆರೆದು ಕಣ್ಣು, ಕಿವಿ, ಮೂಗು...
ಜೊತೆಗೆ ಮನಸ್ಸನ್ನು.....!!

ಕೊನೆಗೊ೦ದು ಕಿವಿಮಾತು...
ಕಟ್ಟಲಿಕ್ಕೆ ವರುಷಗಳು ಬೇಕಾಗಬಹುದು...
ಆದರೆ, ಬೀಳಿಸಲಿಕ್ಕೆ....,
ಗಳಿಗೆಯೊ೦ದು ಸಾಕು...!!!

2 comments:

  1. ಅರ್ಥಪೂರ್ಣವಾದ ಕವನ."ಹೀಗೆ ಅರೆಕ್ಷಣದಲ್ಲಿ ಎಲ್ಲವೂ ಆಗಿಬಿಡೋಲ್ಲ...." ಈ ನುಡಿ ಜೀವನಾನುಭವದಿಂದ ಮೂಡುವಂಥದ್ದು. ಚೆನ್ನಾಗಿದೆ.

    ReplyDelete
  2. ಸ್ಪ೦ದನೆಗೆ ಧನ್ಯವಾದಗಳು..
    ಬರುತ್ತಿರಿ..

    ReplyDelete