ಅರಳು ಕುಸುಮದ ಮುಳ್ಳ
ವೇದನೆಯಿರಲಿ..
ಚಿಗುರು ಜೀವದೆಲೆಗಳಿಗೆ ಒಲವ
ಒನಪುಗಳಿರಲಿ..
ಗ೦ಧ ಪಸರುವ ಮಾರುತವಾಗಿರಲಿ
ಬಾಳ ಬಿ೦ಬ...
ವೇದನೆಯಿರಲಿ..
ಚಿಗುರು ಜೀವದೆಲೆಗಳಿಗೆ ಒಲವ
ಒನಪುಗಳಿರಲಿ..
ಗ೦ಧ ಪಸರುವ ಮಾರುತವಾಗಿರಲಿ
ಬಾಳ ಬಿ೦ಬ...
ಹಿಗ್ಗಿ ಆಡಿದ ಮುದ್ದು
ನೆನಪುಗಳಿರಲಿ..
ಬಗ್ಗಿ ನಡೆಸಿದ ಪರಿಯ
ಹೆಜ್ಜೆ ಗುರುತುಗಳಿರಲಿ..
ಭರದಿ ಉರುಳುವ,
ಮತ್ತೆ ಮರಳುವ,
ಕ್ಷಣಗಳಲಿ ಮುಕ್ತವಾಗಲಿ
ಬದುಕ ಬ೦ಧ...
ನೆನಪುಗಳಿರಲಿ..
ಬಗ್ಗಿ ನಡೆಸಿದ ಪರಿಯ
ಹೆಜ್ಜೆ ಗುರುತುಗಳಿರಲಿ..
ಭರದಿ ಉರುಳುವ,
ಮತ್ತೆ ಮರಳುವ,
ಕ್ಷಣಗಳಲಿ ಮುಕ್ತವಾಗಲಿ
ಬದುಕ ಬ೦ಧ...
ಮು೦ದೆ ಸಾಗುತಿರು,
ನಿನ್ನ ಹಿ೦ಬಾಲಿಸುತಿರು,
ಎಡಬಲಬದಿಗೂ ಇರುತಿರು ನೀ ಅನ೦ತ..
ಸರ್ವದಲೂ ಸವಿಯುವೆ ಆನ೦ದ...
ನಿನ್ನ ಹಿ೦ಬಾಲಿಸುತಿರು,
ಎಡಬಲಬದಿಗೂ ಇರುತಿರು ನೀ ಅನ೦ತ..
ಸರ್ವದಲೂ ಸವಿಯುವೆ ಆನ೦ದ...
ನಿಜ. ಸೆಡ್ಡು ಹೊಡೆಯುವ ಎದೆಗಾರಿಕೆಯಿದ್ದರೆ ಏನನ್ನೂ ಬೇಕಿದ್ದರೂ ಮೀರಿ ಬೆಳೆಯಬಹುದು. ಚೆಂದದ ಕವನ
ReplyDeleteಸ೦ತೋಷ,
ReplyDeleteಧನ್ಯವಾದಗಳು ಮೆಚ್ಚುಗೆಗೆ..
- ಪ್ರಸನ್ನ