Tuesday 17 May 2011

ಹೀಗಿರಲಿ ಬಾಳ ಬಿ೦ಬ...



ಕನಸು ಕನವರಿಕೆಗಳಿರಲಿ..
ಮೌನ ಬವಣೆಗಳಿರಲಿ..
ಕಷ್ಟಗಳಿಗೆದೆಯೊಡ್ಡಿ,
ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿ
ಮನದ ತು೦ಬ...

ಅರಳು ಕುಸುಮದ ಮುಳ್ಳ
ವೇದನೆಯಿರಲಿ..
ಚಿಗುರು ಜೀವದೆಲೆಗಳಿಗೆ ಒಲವ
ಒನಪುಗಳಿರಲಿ..
ಗ೦ಧ ಪಸರುವ ಮಾರುತವಾಗಿರಲಿ
ಬಾಳ ಬಿ೦ಬ...

ಹಿಗ್ಗಿ ಆಡಿದ ಮುದ್ದು
ನೆನಪುಗಳಿರಲಿ..
ಬಗ್ಗಿ ನಡೆಸಿದ ಪರಿಯ
ಹೆಜ್ಜೆ ಗುರುತುಗಳಿರಲಿ..
ಭರದಿ ಉರುಳುವ,
ಮತ್ತೆ ಮರಳುವ,
ಕ್ಷಣಗಳಲಿ ಮುಕ್ತವಾಗಲಿ
ಬದುಕ ಬ೦ಧ...

ಮು೦ದೆ ಸಾಗುತಿರು,
ನಿನ್ನ ಹಿ೦ಬಾಲಿಸುತಿರು,
ಎಡಬಲಬದಿಗೂ ಇರುತಿರು ನೀ ಅನ೦ತ..
ಸರ್ವದಲೂ ಸವಿಯುವೆ ಆನ೦ದ...

2 comments:

  1. ನಿಜ. ಸೆಡ್ಡು ಹೊಡೆಯುವ ಎದೆಗಾರಿಕೆಯಿದ್ದರೆ ಏನನ್ನೂ ಬೇಕಿದ್ದರೂ ಮೀರಿ ಬೆಳೆಯಬಹುದು. ಚೆಂದದ ಕವನ

    ReplyDelete
  2. ಸ೦ತೋಷ,
    ಧನ್ಯವಾದಗಳು ಮೆಚ್ಚುಗೆಗೆ..
    - ಪ್ರಸನ್ನ

    ReplyDelete