ಇದು ಇಂದೂ ಸಂಭವಿಸಿತು
ನಿನ್ನೆಯೂ ಒಂದು, ಮತ್ತೊಂದು ಹೀಗೆಎಲ್ಲರ ಜೀವನದಲ್ಲಿ ಇವು ಸಂಭವಿಸುತ್ತಲೇ ಇರುತ್ತವೆ
ಕಾಲದ ಗಡಿಯಾರದ ಪ್ರತಿ ಚಲನೆಯಲ್ಲಿ
ತೀವ್ರತಮವಾಗಿ ಒಮ್ಮೆ, ಮಂದವಾಗಿ ಮತ್ತೊಮ್ಮೆ
ಸ್ತಬ್ಧವಾಗಿ ಮಗದೊಮ್ಮೆ
ಹೊಂದಿಕೊಳ್ಳುವ ಪರಿಣತಿ ಬೇಕು ಜೀವಕ್ಕೆ.....
ವೇಗ ಬದಲಾದಾಗ ಜೀವನವೇ ಅದನ್ನು ಕಲಿಸಿಬಿಡುತ್ತದೆ
ಒಂದು ಅವಕಾಶವಲ್ಲವೇ ಇದು
ಜೀವನದ ಸಿಂಹಾವಲೋಕನಕ್ಕೆ
ನಿಂತು ಯೋಚಿಸಲಿಕ್ಕೆ
ಮುಂದೊಂದು ಹೆಜ್ಜೆಯಿಡುವ ಮುನ್ನ
ಗಟ್ಟಿಗೊಳಿಸಿಕೊಳ್ಳಲು ಹೆಜ್ಜೆಗಳನ್ನು
ಖಾತ್ರಿ ಪಡಿಸಿಕೊಳ್ಳಲು ಹೆಜ್ಜೆಯಿಡುವ ಜಾಗಗಳನ್ನು
ಈ ಅವಘಡಗಳ ಸರಣಿಯ ಹೊರ ನಿಂತು ನೋಡುತ್ತಿದ್ದೇನೆ
ನನ್ನವರೆಲ್ಲರೊಡನೆ ಮುಂದಿನ ಹೆಜ್ಜೆಗೆ ಗಟ್ಟಿಯಾಗುತ್ತಿದ್ದೇನೆ
No comments:
Post a Comment