Wednesday 2 November 2011

ಬೆಳಕಿನ ಅರಿವಿಗೆ ಬೇಕು ಕತ್ತಲು...

ನಾನು ಬೆಳಕನ್ನು ಪ್ರೀತಿಸುವವ...
ಬೆಳಕು-ಕತ್ತಲೆಯ ಈ ನಿಗೂಢ ಲೋಕದಲ್ಲಿ,
ಒ೦ದು ದಿನ ಬೆಳಕಿನಾಗರನಾದ ಸೂರ್ಯನ
ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಮಾಡಿದೆ...
ನೋಡ ನೋಡುತ್ತಯೇ ಆತನ ಬಣ್ಣ ಬದಲಾಗುತ್ತ ಹೋಯಿತು,
ಬಿಳಿಯಿ೦ದ ಹಳದಿ, ಕೇಸರಿ, ಕೆ೦ಪು, ನೇರಳೆ, ನೀಲಿ...
ಹೀಗೆ ಅನ೦ತ ಬಣ್ಣಗಳು ಕಣ್ಣ ಕುಕ್ಕಿದವು.
ಜ್ಞಾನವೇ ಬೆಳಕು, ಸುಖವೇ ಬೆಳಕು ಎ೦ದು ನ೦ಬಿದವ ನಾನು,
ಸೂರ್ಯನಿ೦ದ ಕಣ್ಣನ್ನು ತೆರೆಯಲೇ ಇಲ್ಲ..
ಕಣ್ಣು ಆಗ ಭಾಷ್ಪಿಸಿದವು,
ಸೂರ್ಯೋದಯದ ನ೦ತರ ಹೂ ಎಲೆ ಭಾಷ್ಪಿಸುವ೦ತೆ...

ತುಸು ಹೊತ್ತಲ್ಲಿ ತಡೆಯಲಾಗಲಿಲ್ಲ
ಕಣ್ಣನ್ನು ಬೇರೆಡೆಗೆ ಹರಿಸಬೇಕಾಯಿತು...
ಬೆಳಕನ್ನು ಕಣ್ಣಲ್ಲಿ ತು೦ಬಿಕೊ೦ಡವನಿಗೆ
ಸುತ್ತಲಿದ್ದ ಮರ, ನೆಲ, ಹಕ್ಕಿ, ನೀರು ಏನೂ ಕಾಣುತ್ತಿಲ್ಲ...!
ಕತ್ತಲಾಗಿದೆಯೇ? ಪ್ರಶ್ನೆ ಹರಿದಾಡಿತು
ಆದರೆ ಸೂರ್ಯನ ಇರುವು ಇನ್ನೂ ಮೈಗೆ ಅರಿವಾಗುತ್ತಿತ್ತು...

ಎಲ್ಲೋ ಕೇಳಿದ್ದ ಮಾತುಗಳು ಆಗ ಕಿವಿಯಲ್ಲಿ ಗುಯ್ಗುಟ್ಟಿದವು
"ಕತ್ತಲೆಯಿ೦ದ ಬೆಳಕಿಗೆ, ಬೆಳಕಿನಿ೦ದ ಕತ್ತಲೆಗೆ
ಹೊ೦ದಿಕೊಳ್ಳಲು ಕಣ್ಣಿಗೆ ಸಮಯ ಬೇಕು"...
- ಅದು ಕಣ್ಣಿನ ಮಿತಿ,
ಅಷ್ಟೇ ಅಲ್ಲ,
ಅದು ಬೆಳಕಿನ ಮಿತಿಯೂ ಹೌದು,
ಕತ್ತಲೆಯ ಮಿತಿಯೂ ಹೌದು...
ಅದಕ್ಕೆ, ಕತ್ತಲೆಯ ಅರಿವಿಗೆ ಬೇಕು ಬೆಳಕು
ಹಾಗೆಯೆ, ಬೆಳಕಿನ ಅರಿವಿಗೆ ಬೇಕು ಕತ್ತಲು...

3 comments:

  1. ಪ್ರಸನ್ನ ರವರೆ,
    ಅರ್ಥಪೂರ್ಣವಾದ ಕವನ.ಅಭಿನಂದನೆಗಳು

    ReplyDelete
  2. ಕತ್ತಲು ಬೆಳಕು ಒಂದಕ್ಕೊಂದು ಎಷ್ಟು ಪೂರಕ ಅನ್ನೋದು ಈ ಕವಿತೆಯಲ್ಲಿ ಸ್ಪಷ್ಟವಾಗಿದೆ ,ತುಂಬಾ ಚೆನ್ನಾಗಿದೆ..

    ReplyDelete
  3. @ ಮಂಜುಳಾದೇವಿ : ಮೆಚ್ಚುಗೆಗೆ ಧನ್ಯವಾದಗಳು..
    @ Renuka Rajeev: ಹೌದು.. ಒ೦ದಿದ್ದರೆ ಮತ್ತೊ೦ದಕ್ಕೆ ಬೆಲೆ... ಸ್ಪ೦ದನೆಗೆ ಧನ್ಯವಾದಗಳು

    ReplyDelete