Wednesday 13 April 2011

ನನ್ನೊಳಗೊಬ್ಬ ನಾ ಪಥಿಕ...

ನನ್ನೊಳಗಿನ ನೀರವ ಮೌನದೊಳು
ನನ್ನ ನಡೆ,
ನನ್ನ ಹೆಜ್ಜೆಯ ಶಬ್ದವಷ್ಟೇ ನನ್ನ ಜೊತೆ...

ನನ್ನೆದೆಯ ಬಡಿತದ
ಲಬ್-ಡಬ್ ತಾಳಕ್ಕೂ,
ಹೆಜ್ಜೆಗಳ ಶಬ್ದಕ್ಕೂ ಜುಗಲ್ ಬ೦ಧಿ...

ನನ್ನ ಭಾರ ಭಾವಗಳಿಗೆ
ದಣಿದಿದೆ,
ಧಮನಿ ಧಮನಿಗಳ ಕಾಲುಹಾದಿ...

ಹೆಜ್ಜೆ ಹೆಜ್ಜೆಗೂ
ನನ್ನ ಅಹಮ್ಮಿನ ಸವೆತ,
ನನ್ನೊಳಗೊಬ್ಬ ನಾ ಪಥಿಕ...

ಗುರಿ ತಲುಪಿದಾಗ
ಹೃದಯ೦ಗಳದಲ್ಲಿ
ನನ್ನ ನೆತ್ತರು ಹೆಜ್ಜೆಗುರುತುಗಳ ರ೦ಗೋಲಿ...

ಪಯಣದ ದಣಿವಿದ್ದರೂ
ಗಳಿಸಿದ ಅನುಭವದ ಗಣಿಯಲ್ಲಿ,
ನನ್ನ ನಾ ಕ೦ಡುಕೊ೦ಡ ಸಾರ್ಥ ಭಾವ...

No comments:

Post a Comment