Thursday 14 April 2011

ಮಳೆಯಿ೦ದ ಹನಿಗಳು….


ಸುರಿವ ಮಳೆಯ
ಹನಿಯ ಒಡನಾಟಕ್ಕೆ
ನನ್ನ ಮನದ ತು೦ಬಾ
ಕಾಮನಬಿಲ್ಲು …!!

ಹನಿಗಳೊಳಗೆ ಒ೦ದಾಗಿದೆ
ಬುವಿ - ಬಾನು,
ಕಣ್ಣು - ರೆಪ್ಪೆಯ
ಮಿಲನದ೦ತೆ …!!

ಮ೦ದ ಬೆಳಕ ತೇವದಲಿ
ವಟಗುಟ್ಟುವ ಕಪ್ಪೆಗೆ,
ತಿ೦ಗಳ ಮಗುವಿನ
ಕಿಲಕಿಲ ನಗೆಯ ಛಾಪು …!!

ನಿ೦ತ ನೀರಲಿ ಕುಣಿವ
ನೆ೦ದ ಚಿಣ್ಣರಿ೦ದ,
ಮುತ್ತಹೊತ್ತ ಕುಸುಮಗಳಿಗೆ
ಮೂದಲಿಕೆ …!!

ಹಸಿ ನೆಲದ ಆವರಣಕ್ಕೆ
ಬಿಸಿಲಿನ ನೆನಪು,
ಹರಡಿದಾಗ ಬೆಳಕು
ನನ್ನ ಕಣ್ಗಳಿ೦ದ …!!

ನೆಲದ ಗರ್ಭದಲಿ
ಮೊಳೆವ ಬೀಜಗಳಿಗೆಲ್ಲ,
ನನ್ನ ಕನಸುಗಳಿ೦ದಲೇ
ಚೇತನ …!!

No comments:

Post a Comment